ಸಾಗರ: ಕಡಜ ಹುಳ ಕಡಿದು 2ನೇ ತರಗತಿಯ ವಿದ್ಯಾರ್ಥಿ ಮೃತ್ಯು!

ಸಾಗರ: ಕಡಜ ಹುಳ ಕಡಿದು 2ನೇ ತರಗತಿಯ ವಿದ್ಯಾರ್ಥಿ ಮೃತ್ಯು!


ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಬಳಿಯ ಅತ್ತಿಸರದಲ್ಲಿ ಕಡಜ ಹುಳ ಕಡಿದು 2ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿ ನಿಶ್ಚಿತ್ (8) ಎಂದು ಗುರುತಿಸಲಾಗಿದೆ.

ಮನೆಯ ಹಿಂದಿನ ಬಾಳೆ ಗಿಡದಲ್ಲಿ ಕಡಜದ ಹುಳುವಿನ ಗೂಡು ಇತ್ತು. ತಂದೆ ವೆಂಕಟೇಶ್ ಹಾಗೂ ಮಗ ನಿಶ್ಚಿತ್ ಮೇಲೆ ಕಡಜದ ಹುಳುಗಳು ದಾಳಿ ಮಾಡಿದ್ದವು. ತಕ್ಷಣವೇ ಹೆಗ್ಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರನ್ನೂ ದಾಖಲಿಸಲಾಗಿತ್ತು.
ಬಳಿಕ ಹೆಚ್ಚಿನ ಚಿಕಿತ್ಸೆಗೆ ತಂದೆ-ಮಗನನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ನಿಶ್ಚಿತ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *