‘ವಂದೇ ಮಾತರಂ’ ಪೂರ್ಣವಾಗಿ ಹಾಡಲ್ಲ: ನೇಣು ಹಾಕಿದರೂ ಎರಡು ಪ್ಯಾರಾ ಮಾತ್ರ ಎಂದ ಬಿ ಕೆ ಹರಿಪ್ರಸಾದ್

‘ವಂದೇ ಮಾತರಂ’ ಪೂರ್ಣವಾಗಿ ಹಾಡಲ್ಲ: ನೇಣು ಹಾಕಿದರೂ ಎರಡು ಪ್ಯಾರಾ ಮಾತ್ರ ಎಂದ ಬಿ ಕೆ ಹರಿಪ್ರಸಾದ್


ನವದೆಹಲಿ: ಕಾಂಗ್ರೆಸ್‌ನ ಯಾವುದೇ ಕಾರ್ಯಕ್ರಮದಲ್ಲೂ ‘ವಂದೇ ಮಾತರಂ’ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ. ಗೀತೆಯ ಎರಡು ಪ್ಯಾರಾಗಳನ್ನು ಮಾತ್ರ ಹಾಡಲಾಗುತ್ತದೆ. ನಮ್ಮನ್ನು
ನೇಣುಹಾಕಿ, ಜೈಲಿಗೆ ಬೇಕಾದ್ರೂ ಹಾಕಿ ನಾವು ಹಾಡುವುದು ಅಷ್ಟು ಮಾತ್ರ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ನವದೆಹಲಿ‌ನಲ್ಲಿ ಮಾತನಾಡಿದ ಅವರು, ‘ವಂದೇ ಮಾತರಂ’ ಗೀತೆಗೆ ಕಾಂಗ್ರೆಸ್ ವರಿಷ್ಠರಿಂದ ಅಗೌರವ ತೋರಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ವಂದೇ ಮಾತರಂ’ ಹಾಡದಂತೆ ತಡೆದಿದ್ದಾರೆ ಎಂಬ ಆರೋಪ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಎಐಸಿಸಿ ಕಚೇರಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವ ಸಂದರ್ಭದಲ್ಲಿ ಕೆಲವು ತಪ್ಪುಗಳು ಉಂಟಾಗಿದ್ದವು. ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಸೂಚಿಸಿದ್ದರು. ಆದರೆ, ಅವರು ಗೀತೆಯನ್ನು ಹಾಡುವುದನ್ನು ತಡೆದಿರಲಿಲ್ಲ ಎಂದು ಹರಿಪ್ರಸಾದ್ ವಿವರಿಸಿದರು.
ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ವಯಸ್ಸನ್ನು ಪರಿಗಣಿಸಿ ಅವರಿಗೆ ಕುರ್ಚಿ ಒದಗಿಸುವಂತೆ ಸೋನಿಯಾ ಗಾಂಧಿ ಮನವಿ ಮಾಡಿದ್ದರು ಎಂದು ಅವರು ತಿಳಿಸಿದರು.

‘ವಂದೇ ಮಾತರಂ’ ವಿಚಾರವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಹರಿಪ್ರಸಾದ್ ಪಕ್ಷದ ಕಾರ್ಯಕ್ರಮಗಳಲ್ಲಿ ಗೀತೆಯ ಎರಡು ಪ್ಯಾರಾಗಳನ್ನಷ್ಟೇ ಹಾಡುವ ನಿಲುವನ್ನು ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *