ಸೌಹಾರ್ದ ಟ್ರಸ್ಟ್ ಸಂಸ್ಥೆ ಸಾಸ್ತಾನ ಹಾಗೂ A2Z Scrap ಸಹಭಾಗಿತ್ವದಲ್ಲಿ ಆಗಸ್ಟ್ 15 ರಂದು ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ

ಸಾಸ್ತಾನ: 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮಾಜಮುಖಿ ಕಾರ್ಯಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸೌಹಾರ್ದ ಟ್ರಸ್ಟ್ ಸಂಸ್ಥೆ ಸಾಸ್ತಾನ ಹಾಗೂ A2Z Scrap ಸಹಭಾಗಿತ್ವದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗುತ್ತಿದೆ.
ಆಗಸ್ಟ್ 15ರಂದು ಬೆಳಗ್ಗೆ 9.30ಕ್ಕೆ ಸಾಸ್ತಾನ ಪಾಂಡೇಶ್ವರದ ಶಿವರಾಮ ಶೆಟ್ಟಿ ಆದರ್ಶ ಐಸ್ ಪ್ಲಾಂಟ್ ಕಂಪೌಂಡ್ ಬಳಿ ಧ್ವಜರೋಹಣ ಕಾರ್ಯಕ್ರಮ ಹಾಗೂ ಉಚಿತ ಆಂಬ್ಯುಲೆನ್ಸ್ ಸೇವೆಯ ಉದ್ಘಾಟನಾ ಸಮಾರಂಭ ನಡೆಯಲಿದೆ.
ಇದರ ಉದ್ಘಾಟನೆಯನ್ನು ಪಾಂಡೇಶ್ವರ ಜೋತಿಷಿಗಳಾದ ವಿದ್ವಾನ್ ಶ್ರೀ ವಿಜಯ್ ಮಂಜರು, ಧರ್ಮಗುರುಗಳಾದ ಕೋಟೇಶ್ವರ ಅಸ್ಸಯ್ಯಿದ್ ಜಾಫರ್ ತಂಙಳ್ ಹಾಗೂ ಧರ್ಮಗುರು ಸಾಸ್ತಾನ ಸೈಂಟ್ ಅಂತೋನಿ ಚರ್ಚ್ ಫಾದರ್ ಸುನಿಲ್ ಡಿಸಿಲ್ವ ಇವರು ಆಂಬುಲೆನ್ಸ್ ಚಾಲನೆ ನೀಡಲಿದ್ದಾರೆ.
ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ
ಅಗತ್ಯವಿರುವ ರೋಗಿಗಳಿಗೆ ಅನುಕೂಲವಾಗುವಂತೆ 24×7 ಸೇವೆ ಒದಗಿಸುವ ಆಶಯವನ್ನು ಸೌಹಾರ್ದ ಟ್ರಸ್ಟ್ ಹಾಗೂ A2Z Scrap ಸಂಸ್ಥೆ ಹೊಂದಿದೆ.
ಮಾನವೀಯತೆ, ಸೇವಾ ಮನೋಭಾವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಮುಂದಿಟ್ಟುಕೊಂಡು ಈ ಸಮಾಜಮುಖಿ ಯೋಜನೆ ರೂಪಿಸಲಾಗಿದೆ.
ಸಮಾರಂಭದಲ್ಲಿ ಗಣ್ಯರು, ಸಮಾಜಸೇವಕರು ಹಾಗೂ ಸಂಸ್ಥೆಯ ಪ್ರಮುಖರು ಭಾಗವಹಿಸಲಿದ್ದು, ಸಮಾಜಕ್ಕೆ ಉಪಯುಕ್ತವಾಗುವ ಹಲವು ಸೇವಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಗುತ್ತಿದೆ.
ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾಕೂಟ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನೂ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
