ಆ.9ಕ್ಕೆ ಮಣೂರಿನಲ್ಲಿ ಪಂಚವರ್ಣದ ಆಸಾಡಿ ಒಡ್ರ್ ಕಾರ್ಯಕ್ರಮ ಕುಂದಗನ್ನಡದ ರಾಯಬಾರಿ ಮನು ಹಂದಾಡಿಯವರಿಂದ ಗಮ್ಜಲ್

ಆ.9ಕ್ಕೆ ಮಣೂರಿನಲ್ಲಿ ಪಂಚವರ್ಣದ ಆಸಾಡಿ ಒಡ್ರ್ ಕಾರ್ಯಕ್ರಮ ಕುಂದಗನ್ನಡದ ರಾಯಬಾರಿ ಮನು ಹಂದಾಡಿಯವರಿಂದ ಗಮ್ಜಲ್


ಕೋಟ: ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಸ್ನೇಹಕೂಟ ಮಣೂರು ಇವರ ಸಹಕಾರದೊಂದಿಗೆ 5ನೇ ವರ್ಷದ ಕುಂದಾಪ್ರ ಭಾಷೆ ಬದ್ಕಿನ ಆಸಾಡಿ ಒಡ್ರ್ ಕಾರ್ಯಕ್ರಮ ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಭಾನುವಾರ ಆ.9ರಂದು ಜರಗಲಿದೆ.

ಪೂರ್ವಾಹ್ನ 9ರಿಂದ ಸ್ನೇಹಕೂಟ ಮಣೂರು ಇವರಿಂದ ನೃತ್ಯವೈಭವ,10.ಗ ಆಸಾಡಿ ಒಡ್ರ್ ಪುರಸ್ಕಾರ ಸಮಾರಂಭದಲ್ಲಿ ರೇಡಿಯೋ ಕುಂದಾಪ್ರ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಇವರಿಗೆ ಆಸಾಡಿ ಒಡ್ರ್ ಪುರಸ್ಕಾರ ನೀಡಿ ಗೌರವಿಸಲಿದ್ದು, ಐದನೇ ವರ್ಷದ ವಿಶೇಷತೆಗಾಗಿ ಐವರು ಸ್ಥಳೀಯ ಗ್ರಾಮ್ಯ ಸಾಧಕರಿಗೆ ಸನ್ಮಾನ,ಆಸಾಡಿ ಒಡ್ರ್ ಗ್ರಾಮೀಣ ತಿಂಡಿ ತಿನಿಸುಗಳು, ಪರಿಕರಗಳ ಸ್ಪರ್ಧೆ, ಬಹುಮಾನ ವಿತರಣಾ ಸಮಾರಂಭ ಜರಗಲಿದೆ.

ಕಾರ್ಯಕ್ರಮವನ್ನು ಗೀತಾನಂದ ಟ್ರಸ್ಟ್ ನಿರ್ದೇಶಕಿ ಗೀತಾ ಆನಂದ್ ಸಿ ಕುಂದರ್ ಉದ್ಘಾಟಿಸಲಿದ್ದು,ಆಸಾಡಿ ಒಡ್ರ್ ಪುರಸ್ಕಾರವನ್ನು ಶ್ರೀ‌ಕೃಷ್ಣಪ್ರಸಾದ ಫೌಂಡೇಶನ್ ನಿರ್ದೇಶಕಿ ಸೋನಾಲಿ ಸಂಪತ್ ಕುಮಾರ್ ಶೆಟ್ಟಿ ಪ್ರದಾನಿಸಲಿದ್ದಾರೆ, ತಿಂಡಿ ತಿನಿಸುಗಳನ್ನು ಸಮಾಜಸೇವಕಿ ಮಲ್ಲಿಕಾ ತಾರಾನಾಥ್ ಹೊಳ್ಳ, ಪರಿಕರವನ್ನು ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಅನಾವರಣಗೊಳಿಸಲಿದ್ದಾರೆ.

ಕುಂದಾಪ್ರ ಭಾಷೆಯ ಕುರಿತಾಗಿ ಕುಂದಗನ್ನಡದ ರಾಯಬಾರಿ ಮನು ಹಂದಾಡಿಯವರಿಂದ ಗಮ್ಜಲ್ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಸ್ನೇಹಕೂಟ ಮಣೂರು ಇದರ ಅಧ್ಯಕ್ಷೆ ಭಾರತಿ ವಿ ಮಯ್ಯ, ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.
ಎಂದು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಪ್ರಕಟಣೆಯಲ್ಲಿ ತಿಳಿದಿದ್ದಾರೆ.

Leave a Reply

Your email address will not be published. Required fields are marked *