‘ಪಾಕಿಸ್ತಾನ ಶತ್ರು ದೇಶವಲ್ಲ’ ಮೋಹನ್ ಭಾಗವತರ ಪಾಕಿಸ್ತಾನಿ ಪ್ಯಾರ್: ಸಂಘ ಪರಿವಾರದ ನಿಲುವಿನ ದ್ವಂದ್ವ ಪ್ರಶ್ನಿಸಿದ ಸುಬ್ರಹ್ಮಣ್ಯ ಪೂಜಾರಿ ಬೈಂದೂರು

‘ಪಾಕಿಸ್ತಾನ ಶತ್ರು ದೇಶವಲ್ಲ’ ಮೋಹನ್ ಭಾಗವತರ ಪಾಕಿಸ್ತಾನಿ ಪ್ಯಾರ್: ಸಂಘ ಪರಿವಾರದ ನಿಲುವಿನ ದ್ವಂದ್ವ ಪ್ರಶ್ನಿಸಿದ ಸುಬ್ರಹ್ಮಣ್ಯ ಪೂಜಾರಿ ಬೈಂದೂರು

ಕುಂದಾಪುರ: ಪಾಕಿಸ್ತಾನ ನಮ್ಮ ಶತ್ರು ದೇಶವಲ್ಲ ದ್ವೇಷದಿಂದ ಏನನ್ನು ಗೆಲ್ಲಲಿಕ್ಕೆ ಆಗುವುದಿಲ್ಲ ಈ ಮಾತನ್ನು ಹೇಳಿದವರು ಆರ್ ಎಸ್ ಎಸ್ ವರಿಷ್ಠರಾದ ಶ್ರೀ ಮೋಹನ್ ಭಾಗವತ್ ಜಿ. ಹಿಂದೂ ಮುಸ್ಲಿಂ ದ್ವೇಷವನ್ನೇ ಉಸಿರಾಗಿಸಿ ಪಾಕಿಸ್ತಾನವನ್ನು ಶತಾಗತಾಯ ಶತ್ರು ರಾಷ್ಟ್ರವನ್ನಾಗಿ ಬಿಂಬಿಸುತ್ತಾ ಬಂದ ಆರ್ ಎಸ್ಸೆಸ್ ನ ಮುಖ್ಯಸ್ಥರ ಈ ಹೇಳಿಕೆಯನ್ನು ಯಾವ ಜಿಹಾದಿಗೆ ಹೋಲಿಸಬೇಕು? ಸ್ವಾತಂತ್ರ್ಯ ಸಮರದಲ್ಲಿ ಬ್ರಿಟಿಷರ ಬೂಟು ನೆಕ್ಕಿ ಕ್ಷಮಾದಾನ ಪಡೆದು, ಆವರ ಒಡೆದು ಅಳುವ ನೀತಿಯನ್ನು ಅನುಸರಿಸಿಯೇ ಇಂದು ಭಾರತದ ಚುಕ್ಕಾಣಿ ಹಿಡಿದವರು ಮುಂದೊಂದು ದಿನ ಅವಶ್ಯಕತೆ ಬಿದ್ದಾಗ ಪಾಕ್ ಹಿಂದೂ ಭಾಯಿ ಭಾಯಿ ಎಂದರೂ ಅಚ್ಚರಿಯೆನಿಲ್ಲಾ ಹಾಗಂತ ಅಹಿಂದ ಘಟಕದ ರಾಜ್ಯ ಕಾರ್ಯಾಧ್ಯಕ್ಷ ಸುಬ್ರಹ್ಮಣ್ಯ ಬೈಂದೂರು ಲೇವಡಿಯಾಡಿದ್ದಾರೆ.

ಪತ್ರಿಕೆ ಹೇಳಿಕೆ ನೀಡಿದ ಸುಬ್ರಹ್ಮಣ್ಯ ಬೈಂದೂರು
ಕಳೆದ ಕೆಲವು ತಿಂಗಳುಗಳ ಹಿಂದೆ
ಪಾಕಿಸ್ತಾನ ನಮ್ಮ ಶತ್ರು ದೇಶವಲ್ಲ, ಅಲ್ಲಿರುವರು ನಮ್ಮಂತೆ ಮನುಷ್ಯರು ಅಲ್ಲಿ ಕೂಡ ಒಳ್ಳೆಯ ಜನ ಇದ್ದಾರೆ ಅಂತ ಮಾಜಿ ಸಂಸದೆ ರಮ್ಯಾ ಅವರು ಹೇಳಿದ್ದರು. ಆದಾಗ ಅಂಡು ಸುಟ್ಟು ಕೊಂಡವರಂತೆ ವರ್ತಿಸಿದ ಇದೇ ಸಂಘ ಪರಿವಾರ ಮತ್ತು ಬಿಜೆಪಿ ನಕಲಿ ಹಿಂದೂ ಸಾಮ್ರಾಟರು ರಮ್ಯಾ ಅವರನ್ನು ಪಕ್ಕಾ ದೇಶದ್ರೋಹಿ ಅಂತಾ ಷರಾ ಬರೆದು ಬಿಟ್ಟರು ಇದೀಗ ಅದೇ ಮಾತನ್ನು ಹೇಳಿರುವ ಮೋಹನ್ ಭಾಗವತ್ ಅವರ ಪಾಕ್ ಪ್ರೀತಿಗೆ ಏನಂತ ಕರೆಯಬೇಕು? ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನ, ಜಮ್ಮು ಕಾಶ್ಮೀರ, ಟಿಪ್ಪು ಸುಲ್ತಾನ್, ರಾಮಮಂದಿರ, ಬಾಬ್ರಿ ಮಸೀದಿ, ಲವ್ ಜಿಹಾದ್, ಗೋ ಮಾತಾ, ಹಲಾಲ್,ಹಿಜಾಬ್ ಅಂತ ದೇಶದ ಬಡ ಯುವಕರ ಮನಸ್ಸಿನಲ್ಲಿ ಕೋಮು ವಿಷಬೀಜವನ್ನು ಬಿತ್ತಿ ಲಕ್ಷಾಂತರ ಜನರ ಸಾವಿಗೆ,ರಕ್ತಪಾತಕ್ಕೆ ಕಾರಣೀಭೂತರಾಗಿ ವಿಶ್ವದೆಲ್ಲೆಡೆ ಭಾರತೀಯರು ಹೆಮ್ಮೆಯಿಂದ ಗುನ ಗುನಿಸುತ್ತಿದ್ದ “ಸಾರೇ ಜಹಾಂನ್ಸೇ ಅಚ್ಚಾ ಹಿಂದೂಸ್ತಾನ್ ಹಮಾರ ” ಎನ್ನುವ ದೇಶದ ಪವಿತ್ರ ಸ್ಲೋಗನ್ ಗೆ ನೆತ್ತರನ್ನು ಮೆತ್ತಿದ ಇದೇ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರು ಇದೀಗ ಶುರುವಿಟ್ಟುಕೊಂಡಿರುವ ಪಾಕ್ ಭಜನೆಗೆ ಏನೆನ್ನಬೇಕು? ಅತ್ಯಂತ ಸೌಹಾರ್ದತೆ,ಸಹೋದರತೆಯಿಂದ ಇದ್ದ ಕರ್ನಾಟಕದ ಕರಾವಳಿಯಲ್ಲಿ ಕೊನೆಗೂ ನೀವು ಕೋಮು ಕಿಚ್ಚನ್ನು ಹಚ್ಚುವುದರಲ್ಲಿ ಯಶಸ್ವಿಯಾದಿರಿ, ಭಾಗವತ್ ಆಡಿದ ಇದೇ ಮಾತನ್ನು ಕರಾವಳಿಯಲ್ಲಿ ಬೇರೆ ಯಾರಾದರೂ ಆಡಿದಿದ್ದರೆ ಇದೀಗ ನೀವು ಹಚ್ಚುತ್ತಿದ್ದ ಕೋಮು ಬೆಂಕಿಯ ನರ್ತನ ಹೇಗಿರುತ್ತಿತ್ತು ಯೋಚಿಸಿದ್ದೀರಾ? ಧರ್ಮ ರಕ್ಷಣೆ ಮುಖವಾಡ ತೊಟ್ಟು ನಿಮ್ಮನ್ನು ಧರ್ಮದ ಹೆಸರಿನಲ್ಲಿ ಬಲಿಪೀಠಕ್ಕೆ ಅರ್ಪಿಸುವವರು ಏನು ಮಾತಾಡಿದರೂ ನಡೆಯುತ್ತೆ , ಬೇರೆಯವರು ಸೌಹಾರ್ದಯುತವಾಗಿ ಮಾತನಾಡಿದರೆ ಅವರಿಗೆ ದೇಶದ್ರೋಹಿ ಪಟ್ಟವನ್ನು ಕಟ್ಟುತ್ತಿರಿ ಇದು ಸರೀನಾ? ಹಾಗಂತ ಯುವ ಜನಾಂಗ ತಾವು ನುಂಗಿರುವ ಕೋಮು ಆಫೀಮು ಗುಳಿಗೆಯನ್ನು ಉಗುಳಿ ಪ್ರಾಂಜ್ವಲ ಮನಸ್ಸಿನಿಂದ ಯೋಚಿಸುವ ಸಮಯ ಬಂದಿದೆ ಎಂದರು.

ತಮ್ಮ ಸ್ವಾರ್ಥಕ್ಕಾಗಿ ಅದೆಷ್ಟೋ ಬಡ ಹಿಂದೂ ಯುವಕರನ್ನು ಬಳಸಿ ಕೊಂಡು ಅವರ ಮನೆಯ ದೀಪವನ್ನು ಶಾಶ್ವತವಾಗಿ ಅರಿಸಿ ಕೋಟಿ ಕೋಟಿಯಲ್ಲಿ ತೂಗುತ್ತಿರುವವರು ಕಟ್ಟಕಡೆಗೆ ರಾಮಮಂದಿರಕ್ಕೂ ಕನ್ನವಿಕ್ಕಿದ್ದಾರೆ. ದೇವರ ಹಣ ಲೂಟಿಯಾದ ಬಗ್ಗೆ ಚಕಾರ ಎತ್ತದ ಈ ಧರ್ಮ ದ್ರೋಹಿಗಳಿಂದ ಧರ್ಮ ಅಪಾಯದಲ್ಲಿಲ್ಲ, ನಾವು ಅಪಾಯದಲ್ಲಿದ್ದೇವೆ ಹಾಗಂತ ಬಿಜೆಪಿ,ಪರಿವಾರದ ಭ್ರಷ್ಟ ಹಿಂದೂ ಭಜನೆಗೆ ಸಡ್ಡು ಹೊಡೆದಿರುವ ಕಾಕ್ರೋಚ್ ಜನತಾ ಪಾರ್ಟಿಯ ಯುವ ಜನಾಂಗ ತೋರಿಸಿ ಕೊಟ್ಟಿದೆ. ಬಹುಷ್ಯ ಇವರೆಲ್ಲರ ಪಾಪದ ಕೊಡ ತುಂಬುತ್ತಾ ಬಂದಿದೆ. “ಸಾರೇ ಜಂಹಾಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ” ಮತ್ತೆ ವಿಶ್ವದೆಲ್ಲೆಡೆ ಮೊಳಗುವ ದಿನ ದೂರವಿಲ್ಲ ಎಂದು ಆಶಯ ವ್ಯಕ್ತಪಡಿಸಿ ಸುಬ್ರಹ್ಮಣ್ಯ ಪೂಜಾರಿ ತಮ್ಮ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *