ಕಾಪು: ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ – ಫುಟ್‌ಬೋರ್ಡ್‌ನಲ್ಲಿ ನೇತಾಡಿಸಿಕೊಂಡೇ ಬಸ್ ಸಂಚಾರ, ಚಾಲಕ- ನಿರ್ವಾಹಕ ವಿರುದ್ಧ ಪ್ರಕರಣ ದಾಖಲು

ಕಾಪು: ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ – ಫುಟ್‌ಬೋರ್ಡ್‌ನಲ್ಲಿ ನೇತಾಡಿಸಿಕೊಂಡೇ ಬಸ್ ಸಂಚಾರ, ಚಾಲಕ- ನಿರ್ವಾಹಕ ವಿರುದ್ಧ ಪ್ರಕರಣ ದಾಖಲು

 

ಕಾಪು: ಖಾಸಗಿ ಬಸ್ಸಿನಲ್ಲಿ ಅದರ ಚಾಲಕ ಹಾಗೂ ನಿರ್ವಾಹಕನು ಬಸ್ಸಿನ ಪರವಾನಿಗೆ ನಿಭಂದನೆಯನ್ನು ಉಲ್ಲಂಘನೆ ಮಾಡಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ಅಪಾಯಕಾರಿಯಾಗಿ ನೇತಾಡುವಂತೆ ಮಾಡಿದ್ದ ಆರೋಪದಡಿ  ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ:
ಆಗಸ್ಟ್ 14 ರಂದು ಶುಕ್ರವಾರ ಬೆಳಿಗ್ಗೆ ಕಾಪು ಪೊಲೀಸ್ ಠಾಣಾ ಎ.ಎಸ್.ಐ ಉದಯ ಕುಮಾರ ರವರು ಹಗಲು ರೌಂಡ್ಸ್ ಕರ್ತವ್ಯಕ್ಕಾಗಿ ಸ್ವಂತ ಸ್ಕೂಟರ್‌ನಲ್ಲಿ ಉದ್ಯಾವರ ಕಡೆಗೆ ತೆರಳುತ್ತಿದ್ದ ವೇಳೆ, ಸುಮಾರು ಬೆಳಗ್ಗೆ 9 ಗಂಟೆಗೆ ಉಡುಪಿ ಜಿಲ್ಲೆ ಕಾಪು ತಾಲೂಕು ಏಣಗುಡ್ಡೆ ಗ್ರಾಮದ ಫಾರೆಸ್ಟ್‌ ಗೇಟ್‌ ಹತ್ತಿರ ರಾ.ಹೆ 66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಕಟಪಾಡಿಕಡೆಯಿಂದ ಉಡುಪಿ ಕಡೆಗೆ KA 19 AE 1095 ನೇ ನೊಂದಣಿ ಸಂಖ್ಯೆಯ ಆನಂದ್ ಎಂದು ಹೆಸರಿರುವ ಬಸ್ಸಿನಲ್ಲಿ ಅದರ ಚಾಲಕ ಹಾಗೂ ನಿರ್ವಾಹಕನು ಬಸ್ಸಿನ ಪರವಾನಿಗೆ ನಿಭಂದನೆಯನ್ನು ಉಲ್ಲಂಘನೆ ಮಾಡಿ ಬಸ್ಸಿನಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹಾಗೂ ಬಸ್ಸಿನ ಫುಟ್ಬೋರ್ಡಿನಲ್ಲಿ ಅಪಾಯಕಾರಿಯಾಗಿ ಪ್ರಯಾಣಿಕರನ್ನು ನೇತಾಡುವ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದು, ಅಲ್ಲದೇ ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿ ಅವರ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬರುತ್ತದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 98/2026 ಕಲಂ: 177, 66, 192(A), 25 (8),123 IMV ACT ಮತ್ತು 125,281 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *