ಪಾಣೆಮಂಗಳೂರು ಗುಡ್ಡೆ ಅಂಗಡಿಯ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ

ಪಾಣೆಮಂಗಳೂರು ಗುಡ್ಡೆ ಅಂಗಡಿಯ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ


ಬಂಟ್ವಾಳ: ಪಾಣೆಮಂಗಳೂರು ಗುಡ್ಡೆ ಅಂಗಡಿಯ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಮಸೀದಿ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಗುಡ್ಡೆ ಅಂಗಡಿ ನೂರುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮೆಲ್ಕಾರ್ ಧ್ವಜಾರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ಆಸೀಫ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು.

ಬಂಟ್ವಾಳ ಪುರಸಭೆಯ ಮಾಜಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಪ್ರಮುಖರಾದ ಅಬ್ದುಲ್ ಮಜೀದ್ ಬೊಗೋಡಿ, ಮೊಹಮ್ಮದ್ ಹನೀಫ್, ಮೊಹಮ್ಮದ್ ಸಜ್ಪ, ಫಾರೂಕ್ ಎಬಿಸಿ, ಹಾಜಿ ಲತೀಫ್ ದಿಲ್‌ಪುಕಾರ್, ಆರೀಫ್ ಮೆಲ್ಕಾರ್, ಯಾಕೂಬ್ ಗುಡ್ಡೆ ಅಂಗಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *