ರೋಟರಿ ಕೋಟ ಸಿಟಿಗೆ ಸಮಗ್ರ ಪ್ರಶಸ್ತಿ: ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ

ರೋಟರಿ ಕೋಟ ಸಿಟಿಗೆ ಸಮಗ್ರ ಪ್ರಶಸ್ತಿ: ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ

ಕೋಟ: ರೋಟರಿ ಜಿಲ್ಲೆ 3182ರ ವಲಯ 2ರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರೋಟರಿ ಕೋಟ ಸಿಟಿ ಕ್ಲಬ್ ಗಮನಾರ್ಹ ಸಾಧನೆ ಮಾಡಿದ್ದು, ರೋಟರಿ ಕೋಟೇಶ್ವರ ಕ್ಲಬ್‌ನೊಂದಿಗೆ ಸಮಾನ ಅಂಕ ಗಳಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ರೋಟರಿ ಕ್ಲಬ್ ಅಂಪಾರ್‌ನ ಆತಿಥ್ಯದಲ್ಲಿ ಸಂಜಯ ಗಾಂಧಿ ಪ್ರೌಢಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಶ್ರೀಕೃಷ್ಣ ಕ್ಯಾಶ್ಯೂಸ್ ವಂಡಾರ್‌ನ ಮಾಲಕ ಸಂಪತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

ಸ್ಪರ್ಧೆಯ ಎಲ್ಲ ವಿಭಾಗಗಳಲ್ಲಿಯೂ ಭಾಗವಹಿಸಿದ ರೋಟರಿ ಕೋಟ ಸಿಟಿ, ರಂಗೋಲಿ ಸ್ಪರ್ಧೆ, ಪುರುಷ ಸದಸ್ಯರ ಚಿತ್ರಗೀತೆ ಹಾಗೂ ಸಮೂಹ ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿತು. ಚಿತ್ರಕಲೆ, ಸಮೂಹ ಗಾಯನ ಹಾಗೂ ಪ್ರಹಸನ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಎಲ್ಲ ವಿಭಾಗಗಳಲ್ಲಿನ ಈ ಸಾಧನೆಯ ಮೂಲಕ ಕ್ಲಬ್ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಕಾರ್ಯಕ್ರಮದಲ್ಲಿ ರೋಟರಿ ಕೋಟ ಸಿಟಿ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ್, ಕಾರ್ಯದರ್ಶಿ ಉಮೇಶ್ ನಾಯರಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಶೆಟ್ಟಿ, ಶ್ಯಾಮ್ ಸುಂದರ್ ನಾಯರಿ, ರೋಟರಿ ಆನ್ಸ್ ಕ್ಲಬ್ ಕಾರ್ಯದರ್ಶಿ ಜ್ಯೋತಿ ನಿತ್ಯಾನಂದ ನಾಯರಿ, ಆನ್ಸ್ ಕ್ಲಬ್ ಚೇರ್ಮನ್ ಶಿವಾನಂದ ನಾಯರಿ, ಉದಯ್ ಕುಮಾರ್ ಶೆಟ್ಟಿ, ನಿತ್ಯಾನಂದ ನಾಯರಿ ಹಾಗೂ ಸದಸ್ಯರಾದ ರೇವತಿ ಶ್ಯಾಮ್ ಸುಂದರ್, ಸುನೀಲ್ ಪೂಜಾರಿ, ಮಂಜುನಾಥ ಉರಾಳ, ವಿಜಯ್ ದೇವಾಡಿಗ, ನಾಗರಾಜ್ ಐತಾಳ್, ರವಿ ಬೇಳೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *