ಗದಗ: ಸಂಗೀತ ಕೇವಲ ಮನರಂಜನೆಗೆ ಮಾತ್ರವಲ್ಲ ನಮ್ಮ ಸಂಸ್ಕೃತಿಯ ಸಂಕೇತ – ಪ್ರೀತಿ ಹೊನ್ನಗುಡಿ.

ಗದಗ: ಸಂಗೀತ ಕೇವಲ ಮನರಂಜನೆಗೆ ಮಾತ್ರವಲ್ಲ ನಮ್ಮ ಸಂಸ್ಕೃತಿಯ ಸಂಕೇತ . ಸಂಗೀತ ಮಾನಸಿಕ ನೆಮ್ಮದಿಗೆ ಕಾರಣ ಮಾತ್ರವಲ್ಲದೆ, ಭಗವಂತನ ಒಲುಮೆಗೆ ಕಾರಣಾಗುವ ಮಾಧ್ಯಮವಾಗಿದೆ.
ಪುಟ್ಟರಾಜ ಕವಿ, ಗವಾಯಿಗಳವರು ಸಂಗೀತದ ಮೂಲಕವೇ ಭಗವಂತನ ಒಲುಮೆ ಪಡೆದುಕೊಂಡು ನಡೆದಾಡುವ ಮಾತನಾಡುವ ದೇವರು ಎನಿಸಿಕೊಂಡಿದ್ದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭೆಯ ಮಹಿಳಾ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಹೊನ್ನಗುಡಿ ಹೇಳಿದರು.

ಅವರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ), ಗದಗ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಎಸ್.ವಿ.ಟಿ ಪ್ಯಾರಾ ಮೆಡಿಕಲ್ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ “ಪುಟ್ಟರಾಜ ಸಂಗೀತ ಸಂಭ್ರಮ-26” ಕಾರ್ಯಕ್ರಮದದಲ್ಲಿ ಮಾತನಾಡಿದ ಅವರು, ಡಾ. ಪಂ. ಪುಟ್ಟರಾಜ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮದ ಮೂಲಕ ಸಂಗೀತದ ಸೇವೆ ಸಲ್ಲಿಸಿ ನಮ್ಮ ಭವ್ಯ ಪರಂಪರೆ ಎತ್ತಿ ಹಿಡಿದ್ದಾರೆ. ಆಶ್ರಮದ ಮೂಲಕ ಇಲ್ಲಿ ತಯ್ಯಾರದ ಶಿಷ್ಯ ಪ್ರಶಿಷ್ಯರು ಗದುಗಿನ ಕೀರ್ತಿ ಹೆಚ್ಚಿಸಿದ್ದಾರೆ. ನಾವು ನೀವೆಲ್ಲ ಈ ಸಂಗೀತ ಉಳಿಸಿ ಬೆಳೆಸಬೇಕು. ಈ ಕಾರ್ಯ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಮಾಡುತ್ತಿದೆ ಎಂದು ಹರುಷ ವ್ಯಕ್ತಪಡಿಸಿದರು. ಸಂಗೀತ, ಸಾಧಕರಿಗೆ ಸನ್ಮಾನ ಮತ್ತು ಪುಸ್ತಕ ದಾಸೋಹವನ್ನು ಒಳಗೊಂಡ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ವನಜಾಕ್ಷಿ ಎಸ್. ತೋಟಗಂಟಿಮಠ ನೆರವೇರಿಸಿದರು.
ಅಧ್ಯಕ್ಷತೆಯನ್ನು ಸೇವಾ ಸಮಿತಿ ಅಧ್ಯಕ್ಷರಾದ ಪಂ. ಫಕೀರೇಶ್ವರ ಶಾಸ್ತ್ರಿ ಹಿರೇಮಠ ಬೆಳ್ಳಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ .ವಿ .ಟಿ .ಚರ್ಮನ ಡಾ. ಸಂತೋಷ್ ತೋಟಗಂಟಿಮಠ ಮಾತನಾಡಿ ಸೇವಾಸಮಿತಿಯ ಸೇವೆಯನ್ನು ಕೊಂಡಾಡಿದರು.
ವಿಜಯ ಬುಕ್ ಡಿಪೋ ಮಾಲೀಕರಾದ ವಿಜಯಕುಮಾರ ಹಿರೇಮಠ, ಶ್ರೀಮತಿ ಅನಿತಾ ತೋಟಗಂಟಿಮಠ, ಶ್ರೀಮತಿ ಸ್ನೇಹಾ ಹಿರೇಮಠ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಕ್ರುಸಾಬ ಮುಲ್ಲಾ, ಗದಗ ಹಾರ್ಮೋನಿಯಂ ಸೋಲೋ , ಸಂಜಯಕುಮಾರ ಅರ್ಕಸಾಲಿ, ಹಿರೇಹಡಗಲಿ ವಯೋಲಿನ್ ಸೋಲೋ,
ನಾಗೇಂದ್ರ ಅಕ್ಕಸಾಲಿ, ಹರ್ಲಾಪುರ ತಬಲಾ ಸೋಲೋ, ಕುಮಾರ ಮಠ ಗುತ್ತರಗಿ ಹಿಂದೂಸ್ತಾನಿ ಗಾಯನ,
ಕೃತಿಕಾ ಶರಣಯ್ಯ ಹಿಡ್ಕಿಮಠ, ಗದಗ ವಚನ ಗಾಯನ, ಪ್ರಸ್ತುತಪಡಿಸಿ ರಂಜಿಸಿದರು.
ಈ ಸಂದರ್ಭದಲ್ಲಿ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಕಲಾ ವಿಕಾಸ ಪರಿಷತ್ ಇವರಿಂದ ವಿದ್ಯಾರ್ಥಿಗಳಿಗೆ ಪುಸ್ತಕ ದಾಸೋಹ ಯೋಜನೆಯಡಿ, ಎರಡು ನೂರು ಯುವಕರಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಪಂ. ಸಿ. ಕೆ. ಹೆಚ್. ಶಾಸ್ತ್ರೀ ಕಡಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರಿಗೂ ಸ್ವಾಗತಿಸಿದರು. ಕುಮಾರ ಹಿರೇಮಠ ವಂದನಾರ್ಪಣೆ ಮಾಡಿದರು.
