ಹಂಗಳೂರು ಕಲಂದರ್ ಖಾಂದಾನ್ ಮೌಲೀದ್: ಆ. 23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಬೃಹತ್ ರಕ್ತದಾನ ಶಿಬಿರ

ಹಂಗಳೂರು ಕಲಂದರ್ ಖಾಂದಾನ್ ಮೌಲೀದ್: ಆ. 23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಬೃಹತ್ ರಕ್ತದಾನ ಶಿಬಿರ

ಕುಂದಾಪುರ: ಕಲಂದರ್ ಖಾಂದಾನ್ ಮೌಲೀದ್‌ನ 11ನೇ ವರ್ಷದ ಕಾರ್ಯಕ್ರಮವು ಆಗಸ್ಟ್ 23ರಂದು ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

1448 ರಬೀವುಲ್ ಅವ್ವಲ್ 9ರಂದು ಬೆಳಗ್ಗೆ 8 ಗಂಟೆಗೆ ಮೌಲೀದ್‌ನ ಅಂಗವಾಗಿ ದುಆ ಕಾರ್ಯಕ್ರಮ ನಡೆಯಲಿದೆ.

ಬಳಿಕ ಬೆಳಗ್ಗೆ 8.30ಕ್ಕೆ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಬೆಳಗ್ಗೆ 10.30ಕ್ಕೆ ಖಾಂದಾನ್ ಮೌಲೀದ್ ಕಾರ್ಯಕ್ರಮವನ್ನು ಯುನಿಟಿ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಹಂಗಳೂರು ಇದರ ಅಧ್ಯಕ್ಷ ಬಾಬು ಕಲಂದರ್ ಹಾಜಿ ಸೇರಿದಂತೆ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಅಸ್ಸಯ್ಯದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಹಾಗೂ ಮೌಲೀದ್ ನೇತೃತ್ವವನ್ನು ಅಬೂಬಕ್ಕರ್ ಸಿದ್ದೀಕ್ ಸಖಾಫಿ ವಹಿಸಲಿದ್ದಾರೆ.

ಮೌಲೀದ್ ಕಾರ್ಯಕ್ರಮದ ಯಶಸ್ಸಿಗೆ ಸಂಘಟಕರು ಸಿದ್ಧತೆ ನಡೆಸಿದ್ದು, ಸಾರ್ವಜನಿಕರು ಹಾಗೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಖಾಂದಾನ್ ನೇತೃತ್ವದ ಸಂಘಟಕರಾದ ಹಂಗಳೂರು ಕಲಂದರ್ ಸಿಟಿ ಶ್ಯಾಮಿಯಾನ ಇವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *