ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ 80 ಸ್ವಾತಂತ್ರ್ಯೋತ್ಸವ

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ 80 ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಷಾ ಡಿ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಮಾಸ್ಟರ್ ಸಂದೇಶ ಬಾಷಣಗೈದರು.
ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಕೆ.ಶ್ರೀಧರ್ ರೈ, ಪ್ರೇಮ, ಧನಂಜಯ ಗೌಡ, ನಿವೃತ್ತ ಶಿಕ್ಷಕಿ ಲಕ್ಷ್ಮೀ, ಪ್ರಮುಖರಾದ ಡಾ. ಗಣರಾಜ ಎಲ್ಕಣ, ರಾಜೇಶ್ ಕರುವನ್, ಗೋಪಾಲ ಕಾರಗುಡ್ಡೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಉಪೇಂದ್ರ ಆಚಾರ್ಯ, ಶಶಿಧರ ಏಮಾಜೆ, ಸೌಮ್ಯ, ದೀಪ್ತಿ ಮೊದಲಾದವರು ಭಾಗವಹಿಸಿದ್ದರು.
