ಕೋಟ: ಬ್ಯಾಂಕ್‌ ಸ್ವಾಧೀನದ ಆಸ್ತಿಗೆ ಅಕ್ರಮ ಪ್ರವೇಶ, ಸೀಲ್‌ ಧ್ವಂಸ, ಪೋಸ್ಟರ್‌ ಹರಿದು ಹಾಕಿದ ಆರೋಪ – 15 ಮಂದಿ ವಿರುದ್ಧ ಪ್ರಕರಣ ದಾಖಲು

ಕೋಟ: ಬ್ಯಾಂಕ್‌ ಸ್ವಾಧೀನದ ಆಸ್ತಿಗೆ ಅಕ್ರಮ ಪ್ರವೇಶ, ಸೀಲ್‌ ಧ್ವಂಸ, ಪೋಸ್ಟರ್‌ ಹರಿದು ಹಾಕಿದ ಆರೋಪ – 15 ಮಂದಿ ವಿರುದ್ಧ ಪ್ರಕರಣ ದಾಖಲು

ಕೋಟ: ಕೋರ್ಟ್ ಆದೇಶದಂತೆ ಬ್ಯಾಂಕ್‌ ಸ್ವಾಧೀನ ಪಡೆದುಕೊಂಡಿದ್ದ ಭದ್ರತಾ ಆಸ್ತಿಗೆ
10 ರಿಂದ 15 ಜನ ಸಹಚರರು ಅಕ್ರಮ ಕೂಟ ಸೇರಿಕೊಂಡು ಬ್ಯಾಂಕ್‌ ನವರು ಬಾಗಿಲಿಗೆ ಸೀಲ್‌ ಮಾಡಿದ್ದ ಬಾಗಿಲಿನ ಲಾಕ್‌ ಗಳನ್ನು ಒಡೆದು ಸ್ವತ್ತಿಗೆ ಅಕ್ರಮ ಪ್ರವೇಶ ಮಾಡಿ ಬ್ಯಾಂಕ್‌ ಸ್ವಾಧೀನ ಪಡೆದಿರುವುದನ್ನು ಸಾರ್ವಜನಿಕರಿಗೆ ತಿಳಿಸಲು ಹಾಕಿದ್ದ ಬ್ಯಾನರ್‌ / ಪೋಸ್ಟರ್‌ ಗಳನ್ನು ಹರಿದು ತೆಗೆದು ಹಾಕಿದ ಆರೋಪದಡಿ ಮೂವರು ಹೆಸರಾಂತ ಆರೋಪಿಗಳು ಸೇರಿದಂತೆ 15 ಮಂದಿಯ ವಿರುದ್ಧ ಕೋಟ ಪೊಲೀಸ್‌ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರದಂತೆ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಸಿಜೆಎಂ, ಉಡುಪಿ ಅವರು Crl. Misc. Case No.106/2023ರಲ್ಲಿ 2024ರ ನವೆಂಬರ್‌ 8ರಂದು ನೀಡಿದ ಎರಡನೇ ಆದೇಶದ ಅನುಸಾರ, ನ್ಯಾಯಾಲಯದ ಆಯುಕ್ತರು ಮತ್ತು ಪೊಲೀಸ್‌ ಅಧಿಕಾರಿಗಳ ಸಹಾಯದೊಂದಿಗೆ ಸಂಬಂಧಿತ ಬ್ಯಾಂಕ್‌ ಭದ್ರತಾ ಆಸ್ತಿಯನ್ನು ಕಾನೂನುಬದ್ಧವಾಗಿ ಸ್ವಾಧೀನಕ್ಕೆ ಪಡೆದುಕೊಂಡಿದ್ದರು.
ಆದರೆ, 2026ರ ಆಗಸ್ಟ್‌ 3ರಂದು ಸಂಜೆ ಸುಮಾರು 7.30 ಗಂಟೆಗೆ ಆರೋಪಿಗಳಾದ ಶಿರಿಯಾರ ಗ್ರಾಮದ ಸತೀಶ್‌ ಆಚಾರ್ಯ, ಸಂಧ್ಯಾ ಆಚಾರ್ಯ ಹಾಗೂ ಅವರೊಂದಿಗೆ ಬಂದಿದ್ದ 10 ರಿಂದ 15 ಮಂದಿ ಸಹಚರರು ಅಕ್ರಮ ಕೂಟ ರಚಿಸಿ, ಬ್ಯಾಂಕ್‌ ಸೀಲ್‌ ಮಾಡಿದ್ದ ಬಾಗಿಲಿನ ಲಾಕ್‌ಗಳನ್ನು ಒಡೆದು ಆಸ್ತಿಯೊಳಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಕೆ ಸಿರಿಕಾ ಬಿ ಯಾದವ್‌ (36) ರವರುನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 127/2026 ಕಲಂ:189(2), 191(2), 329(3), 324(4) , 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *