ಕೋಟ: ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ಹೆಸರಿನಲ್ಲಿ ಸೈಬರ್ ವಂಚನೆ – ಮಹಿಳೆಯ ಖಾತೆಯಿಂದ ₹1.99 ಲಕ್ಷ ದೋಚಿದ ಖದೀಮರು

ಕೋಟ: ಕ್ರೆಡಿಟ್ ಕಾರ್ಡ್‌ನ ಪ್ರೊಟೆಕ್ಷನ್ ಪ್ಲಾನ್ (protection plan) ನವೀಕರಿಸುವುದಾಗಿ ನಂಬಿಸಿ ಸೈಬರ್ ವಂಚಕರು ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್‌ನಿಂದ ಸುಮಾರು ₹ 1,99,696.06/ ಲಕ್ಷ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿರುವ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಟ ನಿವಾಸಿ ಐಶ್ವರ್ಯ ಅವರು ನೀಡಿದ ದೂರಿನ ಪ್ರಕಾರ, ಜುಲೈ 27ರಂದು ಅವರ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಕಾರ್ಡ್ ಪ್ರೊಟೆಕ್ಷನ್ ಪ್ಲಾನ್ ಅನ್ನು ಅಪ್‌ಡೇಟ್ ಮಾಡಬೇಕಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಿಳಿಸಿದ್ದಾನೆ. ಬಳಿಕ ಗೂಗಲ್ ಮೂಲಕ icici.helpsuseronline ಎಂಬ ಲಿಂಕ್ ಕಳುಹಿಸಿದ್ದು, ಅದನ್ನು ನಂಬಿ ಮಹಿಳೆ ಕ್ಲಿಕ್ ಮಾಡಿದ ತಕ್ಷಣ ಅವರ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು ₹1,99,696.06 ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ.
ಘಟನೆಯ ಕುರಿತು ಐಶ್ವರ್ಯ ಅವರು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2026 ಕಲಂ:66(C),66(D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.
